ಮರಕೋತಿ ಆಟ ಆಡಲು ಬೇಕಾಗಿರುವ ವಸ್ತುಗಳು – ಕೋಲು , ಮರದ ಕೆಳಗೆ ಜಾಗ ಆಟದವಿವರಣೆ ಮರಕೋತಿ ಆಟವು ಹಳ್ಳಿಗಳಲ್ಲಿ ಎಲ್ಲಾ ಮಕ್ಕಳಿಗೂ ತಿಳಿದಿರುವ ಹಾಗು ಇಷ್ಟವಾದ ಆಟ ಕೋತಿಗಳಂತೆ ಮರಕ್ಕೆ ಹತ್ತುವುದು ಮರದಿಂದ ಜಿಗಿಯುವುದು ಈ ಆಟದ ಪ್ರಮುಖ ಆಕರ್ಷಣೆ ಹಾಗು ಮಜ ಅದಕ್ಕೇ ಏನೋ ಇದನ್ನು ಮರಕೋತಿ ಎಂದು ಹಿರಿಯರು ಕರೆದಿದ್ದು. ಬೇಸಿಗೆ ಸಮಯದಲ್ಲಿ ರಜಾ ಹಾಗೂ ವಿವಿಧ ಹಣ್ಣುಗಳಿರುವ ಮರದಲ್ಲಿನ ಕೋತಿಗಳಾಗುವುದಂತು ಮಕ್ಕಳಿಗೆ ಖುಷಿಯೋ ಖುಷಿ. ಆಡುವ ವಿಧಾನ · ಈ ಆಟದಲ್ಲಿ ಒಟ್ಟು 10 ರಿಂದ 15 ಆಟಗಾರರು ಇರುತ್ತಾರೆ. · ಈ ಆಟವನ್ನು ಮರದ ಕೆಳಗೆ ಆಡಲಾಗುತ್ತದೆ. · ಅದರಲ್ಲಿ ಇಬ್ಬರು ಆಟಗಾರರು ಮರದ ಕೆಳಗೆ ನಿಂತಿರುತ್ತಾರೆ ಮತ್ತು ಉಳಿದ ಆಟಗಾರರು ಮರಕ್ಕೆ ಹತ್ತಿರುತ್ತಾರೆ. · ಮರದ ಕೆಳಗೆ ಒಂದು ವೃತ್ತವನ್ನು ಬಿಡಿಸಬೇಕು. · ಮರದ ಕೆಳಗೆ ನಿಂತಿರುವ ಆಟಗಾರರಲ್ಲಿ ಆಟಗಾರರಲ್ಲಿ ಒಬ್ಬಾತ ಕೋಲನ್ನು ಆದಷ್ಟು ದೂರಕ್ಕೆ ಎಸೆದು ಮರಕ್ಕೆ ಹತ್ತಬೇಕು · ಕೆಳಗೆ ನಿಂತಿರುವ ಇನ್ನೊಬ್ಬ ಆಟಗಾರನು ಓಡಿ ಹೋಗಿ ಆ ಕೋಲನ್ನು ತಂದು ಬಿಡಿಸಿರುವ ವೃತ್ತದ ಒಳಗಡೆ ಇರಿಸಿ ಮರದಲ್ಲಿರುವ ಆಟಗಾರರನ್ನು ಹಿಡಿಯಬೇಕು. · ಆದರೆ ಹಿಡಿಯುವುದರ ಮೊದಲೆ ಮರದ ಮೇಲಿನ ಆಟಗಾರರಲ್ಲಿ ಯಾರಾದರೂ ಇಳಿದು ಬಂದು ಕೋಲನ್ನು ಮುಟ್ಟಿದಲ್ಲಿ ಮೊದಲು ಕೋಲನ್ನು ವೃತ್ತದಲ್ಲಿರಿಸಿದ ಆಟಗಾರನೇ ಆಟವನ್ನು ಮುಂದುವರಿಸುತ್ತಾನೆ. · ಆದರೆ ಯಾರಾದರೂ ಹಿಡಿಯಲ್ಪಟ್ಟಲ್ಲಿ ಹಿಡಿಯಲ್ಪಟ್ಟ ಆಟಗಾರನು ಮುಂದಿನ ಸರದಿಯಲ್ಲಿ ಕೋಲನ್ನು ವೃತ್ತದ ಒಳಗಿರಿಸಬೇಕು. · ಕೋಲನ್ನು ಎಸೆಯಲು ಆಟಗಾರರು ಒಬ್ಬರ ನಂತರ ಇನ್ನೋಬ್ಬರಂತೆ ಸರದಿಯನ್ನು ಪಾಲಿಸುತ್ತಾರೆ, ಹಾಗೆ ಎಲ್ಲಾ ಆಟಗಾರರಿಗೂ ಕೋಲೆಸೆಯಲು ಅವಕಾಶವಿರುತ್ತದೆ. ಮಾಹಿತಿ ಸಂಗ್ರಹಣೆ- ಅಸ್ಫಿಯಾ ಎಸ್. ಎಮ್ ಆಲಂಬ ಮಾಲೂರು